Submission 1558

ಕಣ್ಣಿಬ್ಬನಿ

Submitted By: Alwin Pavan G

----------------------------------

ಕಣ್ಣಿಬ್ಬನಿ ಅವಿತಿರುವೆಯಾ ರೆಪ್ಪೆಗಳಲಿ ? ನೀ ಅಳುವವರ ಕಂಬನಿ, ನೊಂದವರ ಕಣ್ಮಣಿ! ನೋವ, ಅವಮಾನವ ಹೊತ್ತು ಜಾರಿದರೆ, ನಗುವ ಚಾರಣಿಗರ ಕಾಲ್ತುಳಿತಕ್ಕೆ ಒಡೆದು ಚೂರಾಗುವೆ. ಯಾವ ಬೆಳ್ಳಿ- ಬಂಗಾರ ಹಿಡಿಯ ಬಲ್ಲ ದು ನಿನ್ನ ? ಯಾವ ಮುತ್ತು ರತ್ನಗಳು ಹೋಲ ಬಲ್ಲವು ನಿನ್ನ ? ನೀ ಒಮ್ಮೆ ಸಿಲುಕಿದರೆ ಈ ಪದಸಾಲಿಗನ ಕೈಗೆ ; ನಾ ಪೋಣಿಸುವೆ ಮಿಡಿದ ಭಾವ ಸರಕ್ಕೆ. ಭಾವ( ಆಲ್ವಿನ್ ಪವನ್ ಜಿ)

----------------------------------

Reg ID: HF25-5044

Please Note - You can vote only Once. If you have already voted - the voting will be disabled automatically by the system.

149
Votes
866
Views
11 Months
Since posted

VOTING Closed on Nov 30, 2025!

Scroll to Top