Submission 1720

ಬಣ್ಣದ ಲೋಕ

Submitted By: Nithya B

----------------------------------

ನಮ್ಮ ಜೀವನದಲ್ಲಿ ಬಣ್ಣ ತುಂಬುವ ಜನ ಯಾರೋ ಅದೇ ಜೀವನದಲ್ಲಿ ಬಣ್ಣ ಬದಲಾಯಿಸುವ ಜನ ಯಾರೋ ಪರಿಸ್ಥಿತಿ ಬಂದಾಗ ಊಸರವಳ್ಳಿ ಆಗುವವರು ಯಾರೋ ಅದೇ ಪರಿಸ್ಥಿತಿ ಬಂದಾಗ ಉಸಿರಾಗುವವರು ಯಾರೋ ನಂಬಿಕೆಯ ಹೆಸರಲ್ಲಿ ಬಿಳಿ ಹಾಲನ್ನು ಉಣಿಸುವವರು ಯಾರೋ ಅದೇ ಬಿಳಿ ಹಾಲಾಹಲವನ್ನು ಉಣಿಸುವವರು ಯಾರೋ ಬಣ್ಣಗಳ ನಡುವೆ ಜಗಳ ಆಡುತ್ತಿರುವವರು ಯಾರೋ ಬಣ್ಣಗಳೇ ಇಲ್ಲದೆ ಬದುಕನ್ನು ತೂಗುತ್ತಿರುವವರು ಯಾರೋ ಕ್ರಾಂತಿಯ ಕೆಂಪು,ಶಾಂತಿಯ ಬಿಳಿ, ದುಃಖದ ಕಪ್ಪಿನ ನಡುವೆ ಸಿಲುಕಿದವರಾರೋ ಕೆಂಪಾಗಿ ಇರುವುದು ಇರುವೆಯೆ ಕಪ್ಪಾಗಿ ಇರುವುದು ಇರುವೆಯೆ ವ್ಯತ್ಯಾಸ ಕೇವಲ ಬಣ್ಣ‌ ಅಷ್ಟೇ ಅಲ್ಲ ವ್ಯತ್ಯಾಸ ಗುಣವೂ ಹೌದು!! ಬಣ್ಣಗಳ ಜೊತೆ ಆಟ ಆಡಿದರೆ ಅದು ಹೋಳಿ ಬಣ್ಣಗಳೇ ಇಲ್ಲದ ಬದುಕಿನಲ್ಲಿ ಆಟ ಆಡಿದರೆ ಅದು ಬದುಕಿನ ಸುಳಿ

----------------------------------

Reg ID: HF25-5090

Please Note - You can vote only Once. If you have already voted - the voting will be disabled automatically by the system.

140
Votes
912
Views
11 Months
Since posted

VOTING Closed on Nov 30, 2025!

Scroll to Top