ಚಲುವ ಕನ್ನಡನಾಡು
Submitted By: MAHADEVAPPA HARAKUNI
----------------------------------
ಚಲುವ ಕನ್ನಡ ನಾಡು ಅದುವೇ ಕರ್ನಾಟಕ ಬದುಕಾಗಬೇಕು ಕನ್ನಡ ನೆಲೆ ನಿಲ್ಲಬೇಕು ಕನ್ನಡ ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಒಂದು ದಿನದ ಮಾತಾಗಬಾರದು ಕನ್ನಡ ಉಸಿರಾಗಬೇಕು ಕನ್ನಡ ನೆಲೆ ನಿಲ್ಲಬೇಕು ಕನ್ನಡ (1) ನಮ್ಮ ಭಾಷೆ ಎಷ್ಟೊಂದು ಸುಂದರ ಹೃನ್ಮನ ಸೂರೆಗೊಳ್ಳುವದು ನಮ್ಮ ಕನ್ನಡ ಮನೆ ಮನಗಳ ಬೆಳಗುತಿಹುದು ನಮ್ಮ ಕನ್ನಡ ಸುಂದರ ಸಂಸ್ಕೃತಿಯ ನಾಡು ನಮ್ಮ ಕನ್ನಡ ಅತಿಥಿಗಳ ತಾಣ ನಮ್ಮ ಕನ್ನಡ ಇದುವೇ ನಮ್ಮ ಕರ್ನಾಟಕ, ನಮ್ಮ ಕನ್ನಡ - (2) ವೀರ ಧೀರರಾಳಿದ ನಮ್ಮ ಕರ್ನಾಟಕ ವೀರ ಪರಂಪರೆ ಇರುವ ಕರ್ನಾಟಕ ಕವಿಗಳು ನೆಲೆಸಿರುವ ಪುಣ್ಯಭೂಮಿ ಬಣ್ಣಿಸಲು ಪದಗಳಿಲ್ಲದ, ವರ್ಣಿಸಲು ಆಗದ ಚಲುವ ಕನ್ನಡ ನಾಡು ನಮ್ಮ ಈ ಬೀಡು ಇದುವೇ ನಮ್ಮ ಕರ್ನಾಟಕ, ನಮ್ಮ ಕನ್ನಡ -(3) ವಿಜೃಂಭಿಸಿ ಆಚರಿಸುವರು ಆ ದಿನ ಅದುವೇ ನವಂಬರ್ ಒಂದನೇ ದಿನ ಹಚ್ಚೇವು ಕನ್ನಡದ ದೀಪ ಹಾರಿಸುವೆವು ಕನ್ನಡದ ಧ್ವಜವ ಮಾತನಾಡುವೆವು ಕಂಗ್ಲಿಷ್, ಮಂಗ್ಲಿಷ್ ಮರೆತು ಹೋಗುತಿಹೇವು ಮಾತೃಭಾಷೆಯ -(4) ಎಚ್ಚೆತ್ತು ಕೊಳ್ಳಲಿ ಯುವ ಜನತೆ ಮರೆಯಬಾರದು ಮಾತೃಭಾಷೆಯ ಹಿರಿಯರು ನೀಡಿರುವ ಈ ಹಿರಿತನವನು ಉಳಿಸಬೇಕು ಬೆಳೆಸಬೇಕು ನಾವು ನೀವೆಲ್ಲ ನಮ್ಮ ಆಡು ಭಾಷೆ ಕನ್ನಡ ನಮ್ಮ ತನು ಕನ್ನಡ, ಮನ ಕನ್ನಡ.. (5) ಜೈ ಕರ್ನಾಟಕ..
----------------------------------
Reg ID: HF25-5120
Please Note - You can vote only Once. If you have already voted - the voting will be disabled automatically by the system.