Submission 1874

ನೀನು ಬಿಟ್ಟು ಹೋದ ಮೌನ

Submitted By: Dr.Davalsab Naragund

----------------------------------

ನೀನು ಬಿಟ್ಟು ಹೋದ ಮೇಲೆ ಸಿಗರೇಟ್ ಒಂದನ್ನು ಬಿಟ್ಟು ನಾನು ಏನೆಲ್ಲವೂ ಬಿಟ್ಟಿದ್ದೇನೆ ಯಾಕೆಂದರೆ ಅದು ನಿನ್ನಂತೆ ಮೌನವಾಗಿಯೂ ನಿಧಾನವಾಗಿಯೂ ಸುಡುತ್ತಿತ್ತು ಏನೊಂದು ಹೇಳದೆ ಕೊನೆಗೊಳ್ಳುತ್ತಿತ್ತು ||೧|| ಉರಿಯುವಾಗ ಅದರಿಂದ ಹೊಮ್ಮುವ ಉಸಿರು ನಿನಗೋಸ್ಕರ ಹಿಡಿದಿಟ್ಟುಕೊಂಡದ್ದು ಈಗದು ಕೇವಲ ಹೊಗೆಯನ್ನಷ್ಟೇ ಬಿಡುತ್ತಿಲ್ಲ ||೨|| ಧೂಮಪಾನ ಮಾಡಬೇಡ ಅದು ಕೊಲ್ಲುತ್ತದೆಂದು ಸಮಜಾಯಿಸುತ್ತಿದ್ದೆ ಆದರೆ ನಾನು ಮುಗುಳ್ನಕ್ಕು ನೀನು ಮೊದಲಿಗಿಂತ ಹೆಚ್ಚೇ ಪರಿಣಾಮ ಬೀರುತ್ತಿದ್ದಿಯಾ ಎಂದೆ ||೩|| ನಿಜ ಹೇಳಬೇಕೆಂದರೆ ಹೊಗೆಗಿಂತ ನೀನು ಬಿಟ್ಟು ಹೋದ ಮೌನ ನನ್ನನ್ನು ಕೊಂದಿತು ||೪|| ಈಗ ಸಿಗರೇಟ್ ಕೇವಲ ಸಿಗರೇಟ್ ಆಗಿ ಉಳಿದಿಲ್ಲ ಅದೊಂದು ಹವ್ಯಾಸವಾಗಿ ಬಿಟ್ಟಿದೆ ನೀನು ಅಗಲುವಾಗ ಹೇಳಲು ಮರೆತಿದ್ದ ಅಪೂರ್ಣ ಮಾತನ್ನು ನಾನು ಯಾವಾಗಲೂ ಹುಡುಕುತ್ತಿರುತ್ತೇನೆ ||೫||

----------------------------------

Reg ID: HF25-5123

Please Note - You can vote only Once. If you have already voted - the voting will be disabled automatically by the system.

0
Votes
158
Views
11 Months
Since posted

VOTING Closed on Nov 30, 2025!

Scroll to Top