ನಮ್ಮ ಮಹಾವಿದ್ಯಾಲಯ
Submitted By: Megha Bannur
----------------------------------
ಮಹಾವಿದ್ಯಾಲಯ ಎಂಬ ದೊಡ್ಡ ಹೆಮ್ಮರದಲ್ಲಿ, ಇಂದಿನ ಚಿಲಿಪಿಲಿ ಹಕ್ಕಿಗಳಂತೆ ಕಲಿಕೆಯ ವಿದ್ಯಾರ್ಥಿಗಳು, ಮುಂದೆ ಸಾಧನೆಎಂಬ ದೊಡ್ಡ ರೆಕ್ಕೆಗಳನ್ನು ಹೊಂದುವ ಹಕ್ಕಿಗಳು, ವಿದ್ಯಾರ್ಥಿಗಳ ಭವಿಷ್ಯದ ಗುರಿಗಳಿಗೆ ಇದು ಅಡಿಗಲ್ಲು, ಸಾಧನೆ ಎಂಬ ಗರಿಗಳಿಗೆ ಇದು ಒಂದು ಮೈಲುಗಲ್ಲು, ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಶಿಕ್ಷಕರು, ನೋವು, ನಲಿವು, ಗೆಲುವುಗಳನ್ನು ಹಂಚಿಕೊಳ್ಳುವ ಸ್ನೇಹಿತರು, ನಿನ್ನ ಭವಿಷ್ಯವನ್ನು ನನ್ನಿಂದ ರೂಪಿಸಿಕೋ ಎಂದು ಕೈ ಬೀಸಿ ಕರೆಯುವ ಪುಸ್ತಕಗಳು, ಹೆಜ್ಜೆ ಹೆಜ್ಜೆಯಲ್ಲೂ ಜ್ಞಾನವನ್ನು ಅರಿತಿಕೋ ಎನ್ನುವ ವಿದ್ಯಾಲಯದ ಮೆಟ್ಟಿಲುಗಳು, ಸಾಕಷ್ಟು ಅವಕಾಶಗಳನ್ನು ಒದಗಿಸುವ ಸುಂದರ ವೇದಿಕೆಗಳು, ಎಷ್ಟು ವರ್ಣಿಸಿದರೂ ಮುಗಿಯದ ಈ ಬರವಣಿಗೆಗೆ ನಿಲುಕದ ರೂಪ ನಮ್ಮ ಮಹಾವಿದ್ಯಾಲಯ. ದೇವರು ಇರುವ ತಾಣ ದೇವಾಲಯ, ಜ್ಞಾನವನ್ನು ಹಂಚುವ ತಾಣ ನಮ್ಮ ಮಹಾವಿದ್ಯಾಲಯ
----------------------------------
Reg ID: HF25-5127
Please Note - You can vote only Once. If you have already voted - the voting will be disabled automatically by the system.