ತಂದೆಯ ನೆನಪು
Submitted By: Shubhangi Ravi Kammar
----------------------------------
ಬಾಲ್ಯದಲ್ಲಿ ಕೈ ಹಿಡಿದು ನಡೆಸಿದ ಕೈ ಮಾಯವಾಯಿತು, ಆ ಸ್ಪರ್ಶವಿಲ್ಲದೆ ಇಂದಿನ ಹೆಜ್ಜೆ ಬಲ ಕಳೆದುಕೊಂಡಿತು. ಕಠಿಣ ಮಾತಿನ ಹಿಂದೆ ಮಮತೆಯೇ ಹೊತ್ತಿದ್ದವು, ಇಂದು ಆ ಧ್ವನಿಯೇ ಹೃದಯವನ್ನು ಕಾಡುತ್ತಿದೆ. ಮನೆಯಲ್ಲಿ ಪ್ರತಿಯೊಂದು ಮೂಲೆಯಲ್ಲೂ ನಿನ್ನ ಗುರುತು, ನಿನ್ನ ನಗು ಮಾತ್ರವೇ ಕತ್ತಲಿಗೊಂದು ಬೆಳಕು. ಇಂದು ಉಳಿದದ್ದು ನೆನಪಿನ ದಾರಿಯಷ್ಟೆ, ಆ ದಾರಿಯಲ್ಲೇ ನಿನ್ನನ್ನು ಹುಡುಕುವ ಹೃದಯವೇನು ಬಗೆಯಷ್ಟೆ. ಆಕಾಶ ನೋಡಿದಾಗ ನೀನೇ ಕಾಣಿಸುತ್ತೀಯ, ತಾರೆಯ ಹೊಳಹಿನಲ್ಲಿ ನಗುತ್ತೀಯೆಂದು ತೋರುತ್ತದೆ. ಹೋದರೂ ನಿನ್ನ ಪ್ರೀತಿ ಮರೆಯಾಗಲಿಲ್ಲ, ನೀಡಿದ ಪಾಠ ಎಂದಿಗೂ ಅಳಿಯಲಿಲ್ಲ. ದೂರವಾಗಿದ್ದರೂ ಹೃದಯದ ಹತ್ತಿರವಿರುವೆ, ಪ್ರತಿ ಉಸಿರಿನಲ್ಲೂ ಶಾಶ್ವತವಾಗಿ ಜೀವಿಸುವೆ. ತಂದೆ, ನಿನ್ನಿಲ್ಲದೆ ಬದುಕು ಅಪೂರ್ಣವೆನಿಸಿದರೂ, ನೀನು ಕೊಟ್ಟ ಧೈರ್ಯವೇ ಇಂದಿನ ನನ್ನ ದಾರಿದೀಪ.
----------------------------------
Reg ID: HF25-5139
Please Note - You can vote only Once. If you have already voted - the voting will be disabled automatically by the system.