ವಿಚಾರವಿಲ್ಲದ-ವಿಕಾರ ಶಿಕ್ಷಣ
Submitted By: BASAPPA MUGALAKOD
----------------------------------
ಅರಿವ ಶಿಕ್ಷಣ ಮರೆತು ಹೋಗಿದೆ, ಎತ್ತಹೋದರು ತಲ್ಲಣ ಮಮತೆ ಎಂಬುದು ಕೊರತೆಯಾಗಿದೆ ಹೊತ್ತು ಕುಣಿದಿದೆ ಕಾಂಚಣ. ನೌಕರಿ ಎಂಬ ಚಾಕರಿಗಾಗಿ ಬಿಕರಿಯಾಗಿದೆ ಸುಜ್ಞಾನ ದುಡ್ಡಿಗಾಗಿಯೇ ಅಡ್ಡಹಾದಿಯ ಗುಡ್ಡ ಬಗೆದಿದೆ ಈ ಜನ. ಅಹಂ ಭಾವದಲಿ ಅಂಗೈಯಗಲಲಿ ಜಗವಿದೆಯೆಂಬ ಭ್ರಾಂತಿಯಲಿ ಅರಿವಿನ ಕುರುಹು ಮರೆಯಾಗುತಲಿದೆ ಆಧುನಿಕತೆಯ ತೋಟದಲಿ. ಪದವಿ ಪ್ರಮಾಣ ಹಿಗ್ಗಿದೆಹೊರತು ಕುಗ್ಗಿದೆನೈತಿಕಶಿಕ್ಷಣವು. ವಿಚಾರವಿಲ್ಲದ ವಿಕಾರಶಿಕ್ಷಣ, ಕಳಚಬೇಕು ಈ ಮನುಕುಲವು.
----------------------------------
Reg ID: HF25-5143
Please Note - You can vote only Once. If you have already voted - the voting will be disabled automatically by the system.