ತುಡಿತ
Submitted By: DEEPALI DEEPAK SAMANT
----------------------------------
ಜೀವ ಜಾಲದಲ್ಲಿಯಿರಲು / ಜೀವ ಸೆಲೆಯ ತುಡಿತವು / ನೋವ ನುಂಗಿ ಕಷ್ಟ ಮರೆತು / ಸಾವು ಗೆಲುವ ಮಿಡಿತವು // ಕಟ್ಟ ಕಡೆಯ ಯತ್ನದಿಂದ / ದಿಟ್ಟತನದಿ ಚಿಗುರಿತು / ಕೆಟ್ಟ ಸಮಯ ಗತಿಸಿತೆಂದು / ಪುಟ್ಟ ಸಸಿಯು ಹೇಳಿತು // ನಂಬಿಕೆಯಲಿ ಯತ್ನಪಡಲು / ಕಂಬದಲ್ಲು ಜೀವನ / ತುಂಬುತಲಿದೆ ಮನುಜನಲ್ಲಿ / ಗುಂಬ ತೊಡೆವ ಸಾಧನ //
----------------------------------
Reg ID: HF25-5150
Please Note - You can vote only Once. If you have already voted - the voting will be disabled automatically by the system.