Submission 2005

ಪ್ರಣವ ಧ್ವನಿ

Submitted By: Anant Kotabagi

----------------------------------

ವಾಗರ್ಥದ ಭಾವಾರ್ಥದ ಸೂಚ್ಯಾರ್ಥದ ಧ್ವನ್ಯಾರ್ಥದ ಸರ್ವಾರ್ಥವು ಪ್ರಣವ ನಾದದಲ್ಲಿ ಲೀನವಾಗಲಿ ಪರಮಾರ್ಥದ ಧ್ಯೇಯ ಬಲಿತು ಸ್ವಾರ್ಥದ ಸೆಲೆಯೆಲ್ಲ ಬತ್ತಿ ಚಿತ್ತ ಸ್ವಾಸ್ಥ್ಯ ಸೂರೆಗೊಂಡು ಆನಂದವು ತುಳುಕಲಿ ಶಾಂತಿ ಮಂತ್ರ ಚರಣದಂತೆ ಘನೀಭೂತ ಕಾಂತಿಯಂತೆ ಸುಪ್ರಸನ್ನ ಭಾವ ಮನದ ಸಲಿಲದಲ್ಲಿ ನೆಲೆಸಲಿ ಓಂಕಾರದ ನಾದವೊಂದೇ ಅಂತರ್ಯದಿ ಮೊಳಗಿ ಸುತ್ತ ಸ್ವರಹೀನತೆ ಅಳಿಯಲಿ ಸಚ್ಚಿದಾನಂದ ರೂಪಿ ಆತ್ಮ ತನ್ನ ಅಸ್ತಿತ್ವವ ವಿಸ್ತರಿಸುತ ಕಣಕಣವೂ ಓಂಕಾರದ ಹರವಿನಲ್ಲಿ ಓಂಕಾರದ ಅರ್ಥಕೆಳಸಿ ಓಂಕಾರಾದಿ ಲೀನವಾಗಿ ಓಂಕಾರದ ಧ್ವನಿಯಾಗಲಿ ಓಂ...ಓಂ..ಓಂ..

----------------------------------

Reg ID: HF25-5160

Please Note - You can vote only Once. If you have already voted - the voting will be disabled automatically by the system.

30
Votes
323
Views
10 Months
Since posted

VOTING Closed on Nov 30, 2025!

Scroll to Top