Submission 2057

ಜ್ಞಾನಯೋಗಿ ಸಿದ್ದೇಶ್ವರ

Submitted By: ಎಮ್.ಎಚ್.ಹಾಲ್ಯಾಳ. ಕೋಳೂರು

----------------------------------

ಆಸೆಯ ಅರಮನೆಯ ಶಾಶ್ವತದಿ ತೊರೆದಾತ, ಕಿಸೆಯಿಲ್ಲದ ಶ್ವೇತ ಬಟ್ಟೆಯನು ತೊಟ್ಟಾತ, ಉಷೆಯ ಕಾಲದೊಳೆದ್ದು ದಿವ್ಯತೆ ಸಾರಿದ-ನಮ್ಮ ಜ್ಞಾನಯೋಗಿ..೧ ನಡೆಯಲಿ ನುಡಿಯಲಿ ಅಂತರ ಇರದಾತ, ಕಡೆಯವರೆಗೂ ನುಡಿದಂತೆ ಸತ್ಯದಿ ನಡೆದಾತ, ಸಡಗರ ಸಂಭ್ರಮ ಎಂದಿಗೂ ಬಯಸದ, ಕಡು ನೇಹದಿ ಮನಗೆದ್ದ-ನಮ್ಮ ಜ್ಞಾನಯೋಗಿ..೨ ಬೇಕೆಂಬ ಬಯಕೆಯ ಮರೆತು ಎಲ್ಲರೊಳು ಬೆರೆತು, ಸಾಕು ಎನ್ನುವ ಸರಳ ಸೂತ್ರವ ಹಿಡಿದಾತ, ವಾಕ್ ಸಿದ್ಧಿಯ ಪಡೆದು ಯೋಗ ಮಾರ್ಗದಿ ನಡೆದು, ಜ್ಞಾನ ದಾಸೋಹ ನಡೆಸಿದ-ನಮ್ಮ ಜ್ಞಾನಯೋಗಿ..೩ ಧನ ಕನಕವನೊಲ್ಲ ಸಿರಿ ಸಂಪತ್ತನೊಲ್ಲ ಮನದಲ್ಲಿ ಒಂದಿಷ್ಟೂ ಆಸೆ ಎಂಬುವದಿಲ್ಲ, ತನು-ಮನದಲ್ಲಿ ಎಳ್ಳಷ್ಟೂ ಕಾಮನೆಳಿಲ್ಲ ಸರಳತೆಯ ಸಾಕಾರ ಮೂರ್ತಿ-ನಮ್ಮ ಜ್ಞಾನಯೋಗಿ..೪

----------------------------------

Reg ID: HF25-5191

Please Note - You can vote only Once. If you have already voted - the voting will be disabled automatically by the system.

80
Votes
572
Views
10 Months
Since posted

VOTING Closed on Nov 30, 2025!

Scroll to Top