Submission 2117

ಶತಮಾನದ ಸರಳ ಸಂತ

Submitted By: Sujata S Hyalad

----------------------------------

ಆಧ್ಯಾತ್ಮ ಲೋಕದ ವಜ್ರ ನೀವು, ಜ್ಞಾನಯೋಗಾಶ್ರಮದ ಬೆಳಕು ನೀವು, ಯೋಗದ ಗುರು, ಭಕ್ತಿ ಸುಧೆಯ ಹರಿಸಿದ ಜ್ಞಾನಿ ನೀವು. ಕಿಸೆ ಇಲ್ಲದ ಅಂಗಿ ತೊಟ್ಟ ಯೋಗಿ ನೀವು, ಯಾವ ವ್ಯಾಮೋಹಕ್ಕೂ ಒಳಗಾಗದ ತ್ಯಾಗಿ ನೀವು. ಹಣ, ಪ್ರಶಸ್ತಿಗಳನ್ನೂ ನಗುತ್ತಲೇ ನಿರಾಕರಿಸಿದ ಸಂತ ನೀವು, ಪ್ರವಚನದಿಂದ ಕೋಟ್ಯಂತರ ಹೃದಯ ಗೆದ್ದ ಸರಳ ಜೀವಿ. ಶಿವ-ಶಿವ ಎಂದರೆ ನೋಡಲಿಲ್ಲ, ಹರ-ಹರ ಎಂದರೆ ಕೆಳಲಿಲ್ಲ, ದೇವರು ಹೀಗಿರಬೇಕು ಎಂದು ತೋರಿಸಿಕೊಟ್ಟವರು ನೀವು. ಮೌನವಾಗಿಯೇ ಜ್ಞಾನಸುಧೆ ವಿತರಿಸಿ, ಮೌನವಾಗಿಯೇ ಹೊರಟುಹೋದ ಪೂಜ್ಯರು.

----------------------------------

Reg ID: HF25-5218

Please Note - You can vote only Once. If you have already voted - the voting will be disabled automatically by the system.

3,023
Votes
37,629
Views
10 Months
Since posted

VOTING Closed on Nov 30, 2025!

Scroll to Top