ಗಜಲ್
Submitted By: Jyoti.B.Devanaganv
----------------------------------
ಅರಳಿದ ಹೂಗಳಲಿ ಸುಗಂಧವಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ಮುಗಿಲ ತಾರೆಗಳು ಮಿನುಗುತಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ವಿನಾಶದ ಸುಳಿಗಾಳಿ ನಿನ್ನನು ಸೋಕಿ ಹೋದುದು ನಿಜವಹುದೇ ಇಳೆಯ ಬಸಿರಲಿ ಸಣ್ಣ ಮೊಳಕೆಯಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ಎದೆ ಮರುಭೂಮಿ ಅಂಗಲಾಚುತಿದೆ ದುಮುಗುಡುವ ಮೋಡಗಳಲಿ ಒಡಲು ಬಿರಿದು ಬಿಕ್ಕಿದರು ಕರುಣೆಯಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ಸಾಲು ಮರಗಳ ಮರ್ಮರ ದನಿ ಉಡುಗಿ ಹೋದದ್ದು ಯಾರ ಶಾಪಕೆ ವಸಂತಕೆ ಶುಕಗಳು ಉಲಿಯುತಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ನಿನ್ನ ಧ್ಯಾನದಲಿ ಪರವಶವಾದ ಪ್ರೇಮ ಮತ್ತೇನು ಜಪಿಸುವುದು ಆಗಮನದ ಸುಳಿವೇ ದೊರೆಯುತಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ಮೆಹಫಿಲ್ ಸಿಂಗಾರಗೊಂಡಿದೆ ಮುಲಾಖಾತ್ ನಿರೀಕ್ಷೆಯಲಿ ತುಂಬಿಟ್ಟ ಮಧುದಾನಿ ಸೂರೆಯಾಗಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು ಆತ್ಮದ ಮೊರೆ ಕೇಳಲಾದರು ಒಮ್ಮೆ ಬರಬಾರದೇ ಒಲವೇ ಚಿಜ್ಯೋತಿಯಲಿ ಅನ್ಯ ಬಯಕೆಗಳಿಲ್ಲ ಪ್ರೇಮವೇ ನಿನ್ನ ವಿಳಾಸ ತಿಳಿಸು
----------------------------------
Reg ID: HF25-5249
Please Note - You can vote only Once. If you have already voted - the voting will be disabled automatically by the system.