ಅವಳೊಂದು ಅದ್ಭುತ ಕಾವ್ಯ...
Submitted By: Bhagyavati Deshpande
----------------------------------
ಅವಳೊಂದು ಅದ್ಭುತ ಕಾವ್ಯ, ಪ್ರತಿಬಾರಿ ನಾ ಓದಿ ತಿಳಿಯುವ ಪ್ರಯತ್ನ ಮಾಡಿದಾಗಲೂ, ಹೊಸ ಅರ್ಥವನ್ನೇ ನೀಡುತ್ತಾಳೆ, ತದೇಕ ಚಿತ್ತದಿಂದ ನೆನಪುಗಳಲ್ಲಿ ಬಂಧಿಸಿ ಹಿಡಿದಿಟ್ಟು ಬಿಡುತ್ತಾಳೆ, ಕೆಲವೊಮ್ಮೆ ಹುಮ್ಮಸ್ಸಿನ ರಾಗವಾಗಿ ಬದಲಾದರೆ, ಇನ್ನು ಕೆಲವೊಮ್ಮೆ ನೋವಿನ ಹಾಡಾಗಿ ಬಿಡುತ್ತಾಳೆ, ಬಿಡದ ಬಂಧಕ್ಕೋ-ಭಾವಕ್ಕೋ ಏನೋ.. ದೂರವಾಗದೆ ನೆರಳಾಗಿ ಇನ್ನು ಸುಡುತ್ತಿದ್ದಾಳೆ " ನೆನಪಾಗಿ" .
----------------------------------
Reg ID: HF25-5258
Please Note - You can vote only Once. If you have already voted - the voting will be disabled automatically by the system.