Submission 2281

ನಾನು ಕವಿಯೇ?

Submitted By: ಸಂಕಲ್ಪ (ಸದಾಶಿವ ಡಿ ಓ)

----------------------------------

ವಾಲ್ಮೀಕಿ ವ್ಯಾಸ ಪಂಪ ರನ್ನ ಜನ್ನರ ಒಳಗಿಳಿಯದೆ ಲಕ್ಷ್ಮೀಶ ಕಾಳಿದಾಸ ರಾಘವಾಂಕ ಹರಿಹರರ ಸತ್ವವ ಅರಿಯದೆ ನಾನು ಕವಿಯೇ? ವಚನ ಸಾಹಿತ್ಯದ ಚಳುವಳಿ, ದಾಸರ ಕೀರ್ತನೆಯ ಬಳುವಳಿ ಸರ್ವಜ್ಞ ತ್ರಿಪದಿಯ ಕಳಕಳಿ, ತೀರ್ಥಂಕರ ಬದುಕಿನ ಭವಾವಳಿ ತಿಳಿಯದೆ ನಾನು ಕವಿಯೇ? ಜ್ಞಾನಪೀಠರ ಅಸ್ಮಿತೆ ಹುಡುಕಿ, ಕಂಠಯ್ಯ ಚಿತ್ತಾಲರ ಚಿತ್ತದಲಿ ಬದುಕಿ ತರಾಸು ತ್ರಿವೇಣಿ ಅನಕೃ ಕೆದಕಿ, ಗೊರೂರು ತೇಜಸ್ವಿ ಗುಣವ ಇಣುಕಿ ಕಲಿಯದೆ ನಾನು ಕವಿಯೇ? ಸಂತರ ಸದಾಶಯದ ಸದ್ಭಕ್ತಿ, ಅವಧೂತ ಪರಂಪರೆಯ ಚಿತ್ಶಕ್ತಿ ಜಾನಪದ ಭವಸಾರ ಯುಕ್ತಿ, ಆಗಿಂದ ಈವರೆಗೆನ ಪದಭಾವ ಮುಕ್ತಿ ನೆನೆಯದೇ ನಾನು ಕವಿಯೇ? ಓದಿ ಓದಿ ಮರುಳಾದರೆ, ಬರೆದು ಬರೆದು ಸ್ಪುಟವಾದರೆ ಈ ಕವಿದ ವಾತಾವರಣದಲಿ ನೀವು ನನ್ನ ಸಹಿಸಿಕೊಂಡರೆ ಬಹುಷಃ ನಾನೂ ಕವಿಯೇ!

----------------------------------

Reg ID: HF25-5271

Please Note - You can vote only Once. If you have already voted - the voting will be disabled automatically by the system.

213
Votes
1,020
Views
10 Months
Since posted

VOTING Closed on Nov 30, 2025!

Scroll to Top