Submission 2325

"ನಗು"

Submitted By: Shubhangi Sanjaykumar Patil

----------------------------------

ಮೊಗವೆಂಬ ಅಂಗಳದಲ್ಲಿ ಸದಾ ಅರಳಲಿ ಹೂವೆಂಬ ನಗು ಇಲ್ಲಿ ನಗುವ ಮನಸೇ ಪುಟ್ಟ ಮಗು ಮದ್ದಿನಂತಿರುವ ಈ ನಗುವಿನ ಭರಣಿ ಮರುಕಳಿಸುವುದು ಸವಿನೆನಪಿನ ಸರಣಿ ನಗುವಿನಿಂದಲೇ ಸ್ವರ್ಗವಾಗುವುದೀ ಧರಣಿ ಬರಿದಾಗದಿರಲಿ ನಗುವಿನ ಜೋಳಿಗೆ ನಗುವೇ ಬಾಳಿನ ಸಿಹಿ ಹೋಳಿಗೆ ನಕ್ಕರೇ ದೂರ ಎದೆಯ ಭಾರ ನಗುತ್ತಲೇ ಸಾಗಲಿ ಬಾಳ ತೇರಾ ನಿರಂತರವಾಗಲಿ ನಗುವಿನ ಸುರಿಮಳೆ ಬಾಡದಿರಲಿ ನಗುವಿನ ಕಳೆ ನಗುತಿರು ಇಲ್ಲದೆ ಯಾವ ಕಾರಣ ನಗಲು ಬೇಕಿಲ್ಲ ಯಾವುದೇ ಹಣ ಮನತುಂಬಿ ನಗುತಿರು ನೀ ಕ್ಷಣ ಪ್ರತಿಕ್ಷಣ...

----------------------------------

Reg ID: HF25-5287

Please Note - You can vote only Once. If you have already voted - the voting will be disabled automatically by the system.

340
Votes
1,758
Views
10 Months
Since posted

VOTING Closed on Nov 30, 2025!

Scroll to Top