Submission 2359

ಮಾತೆ-ಗುರು

Submitted By: Rajeshwari S Shidlihal

----------------------------------

ಮೊಗವ ಕಂಡೆ ನಗುವ ಕಂಡೆ ‎ನಗುವ ಮೊಗದ ಮಗುವ ಕಂಡೆ ‎ಸೊಗದ ಸಿರಿಯ ಸೊಗಸ ಕಂಡೆ ‎ಸಿರಿಯ ಸತ್ಯ ಸಸಿಯ ಕಂಡೆ | ‎ ‎ಸ್ವಚ್ಛಂದ ಮನದ ಭಾವ ಕಂಡೆ ‎ಹಾವ ಭಾವದ ಮೂಲ ಕಂಡೆ ‎ಶುದ್ಧ ಮುಗ್ಧ ರೂಪ ಕಂಡೆ ‎ಮುಗ್ಧ ಮುದ್ದು ಮೊಗವ ಕಂಡೆ | ‎ಸಹಜ ನಡೆಯ ನುಡಿಯ ಕಂಡೆ ‎ಸದ್ಭಾವ ಶಿಲ್ಪಿಯ ರೂಪ ಕಂಡೆ ‎ಮೌನ ಮಂದಿರದಿ, ಮೌನ ಮುರಿವ ಮಾತೆ ಕಂಡೆ ‎ಮಾತೆಯಲ್ಲಿ ಗುರುವ ಕಂಡೆ ||

----------------------------------

Reg ID: HF25-5298

Please Note - You can vote only Once. If you have already voted - the voting will be disabled automatically by the system.

51
Votes
494
Views
10 Months
Since posted

VOTING Closed on Nov 30, 2025!

Scroll to Top