Submission 2395

ಕಾಣುವ ದೇವರು

Submitted By: Shivanand gurupada totagi

----------------------------------

ಒಂಬತ್ತು ತಿಂಗಳು ಕಷ್ಟಪಟ್ಟು ನನ್ನನು ನೀ ಹೊತ್ತಿರುವೆ, ಮನೆಯ ಮೊದಲ ಗುರು ನೀನಾಗಿರುವೆ. ಚಿಕ್ಕವನಿಂದ ದೊಡ್ಡವನಾಗುವರೆಗೂ ನೀ ಬೆಳಸಿರುವೆ , ನಿನಗೆ ನಾನೆಂದೆಂದಿಗೂ ನಮಿಸುವೆ. ನಿನ್ನೆದೆಯ ಹಾಲು ಕುಡಿದು ನಾ ಬೆಳೆದಿರುವೆ, ಮಕ್ಕಳ ಸುಖಕ್ಕಾಗಿ ಸರ್ವಸ್ವವನ್ನು ನೀ ಧಾರೆಯೆಳೆದಿರುವೆ. ತಪ್ಪು ಮಾಡಿದಾಗ ತಿದ್ದಿ ನೀ ಬುದ್ಧಿ ಹೇಳಿರುವೆ, ಸನ್ಮಾರ್ಗದಲ್ಲಿ ನೀ ನನ್ನ ಕೈ ಹಿಡಿದು ನಡೆಸಿರುವೆ. ಮಮತೆಯ ಮಡಿಲು,ತ್ಯಾಗದ ಒಡಲು ನೀನಾಗಿರುವೆ, ಕಾಣುವ ದೇವರಾಗಿರುವೆ. ನನ್ನ ನಗುವಲ್ಲೇ ನಿನ್ನ ಖುಷಿಯನ್ನು ಕಂಡಿರುವೆ. ಯಾರಿಹರು ನಿನ್ನನ್ನು ಮೀರಿಸುವಂತವರು ಈ ಜಗದ ನಡುವೆ, ಎಂದೆಂದಿಗೂ ನನ್ನ ಪಾಲಿನ ದೇವರು ನೀನಾಗಿರುವೆ. ಮರುಜನ್ಮದಲ್ಲೂ ನಿನ್ನ ಮಗನಾಗಲು ನಾ ಹರಕೆ ಹೊರುವೆ, ನಿನ್ನ ಋಣ ತೀರಿಸಲು ಎಂದಿಗಾದರೂ ಸದ್ಯವೇ..?

----------------------------------

Reg ID: HF25-5310

Please Note - You can vote only Once. If you have already voted - the voting will be disabled automatically by the system.

99
Votes
588
Views
1 Year
Since posted

VOTING Closed on Nov 30, 2025!

Scroll to Top