Submission 2405

ನೀನು ಶಾಲೆಗೆ ಹೋದಾಗ

Submitted By: KAVYA SANDEEPA KULKARNI

----------------------------------

ಮಗು, ನೀನು ಶಾಲೆಗೆ ಹೋದಾಗ ನಾನು ಆರಾಮಾಗಿರುವೆ ಎಂದುಕೊಂಡೆ ಮನೆ ಎಲ್ಲಿ ಖಾಲಿ ಖಾಲಿ ! ಅತ್ತೊಂದು ಇತ್ತೊಂದು ಬಿದ್ದ ಬೂಟುಗಳು ಜೊತೆಗೆಯಾಗಿ ಕುಳಿತುಕೊಂಡು, ನನ್ನ ಬಗ್ಗೆ ಏನೋ ಮಾತನಾಡುತಿವೆ ಸಾಲು ಸಾಲಾಗಿ ನಿಂತ ದಿಂಬುಗಳು ನನ್ನ ನೋಡಿ ಸಿಟ್ಟಾಗಿವೆ, ಅಲ್ಲಿಲ್ಲಿ ಬಿದ್ದಾಡುವ ಆ ಆಟಿಕೆಗಳು ಒಂದೆಡೆ ಸೇರಿ, ಏನೋ ಗುಪ್ತ ಸಭೆ ನೆಡೆಸುತಿವೆ, ಕಥೆ ಪುಸ್ತಕಗಳು ಬಣ್ಣ ಬಣ್ಣದ ಪೆನ್ಸಿಲ್ಲುಗಳು ಒಂದಡೆ ಕುಳಿತು ನಿನ್ನ ದಾರಿ ಕಾಯುತಿವೆ, ಸೈಕಲ್ಲು ಒಂದಡೆ ಹಾಯಾಗಿ ನಿದ್ರೆ ಮಾಡುತಿದೆ ಮತ್ತೆ ಸಂಜೆಗೆ ನಾನು ಆಡ್ಡಾಡಬೇಕೆಂದು, 'ಅಮ್ಮಾ ಅಮ್ಮಾ' ಎಂಬ ಕೂಗು ಕೇಳಿ ಬಹಳ ಸಮಯ ಕೆಳೆದು ಹೋಗಿದೆ ಮಗು ನೀನು ಶಾಲೆಗೆ ಹೋದಾಗ

----------------------------------

Reg ID: HF25-5311

Please Note - You can vote only Once. If you have already voted - the voting will be disabled automatically by the system.

15
Votes
241
Views
11 Months
Since posted

VOTING Closed on Nov 30, 2025!

Scroll to Top