ಅನ್ನದೇವರು
Submitted By: Vinuta Hanchinamani
----------------------------------
ಮುರುಕಲು ಮನೆಯಲಿ ಒಡಕಲು ಪಾತ್ರೆ ಕುರುಕಲು ಇರುವುದು ಬರಿ ಬಡತನ ಮಾತ್ರ ಚುರುಕು ತಣಿಸಲು ಅನ್ನ ಬೇಯಿಸಲೆ ಬೇಕು ಒಲೆಯ ಬೆಂಕಿ ಅನ್ನವನಷ್ಟೇ ಬೇಯಿಸುತ್ತಿಲ್ಲ ಅಲೆಯಾದ ಹಸಿವೆ ಹೊಟ್ಟೆ ಸುಡುತ್ತಿದೆಯಲ್ಲ ಹಸಿದ ಹೊಟ್ಟೆಯ ಕಿಚ್ಚಿಗಿಂತ ಮಿಗಿಲೇನಿದೆ ಬಸಿದ ಬೆವರು ಅದನು ತಣಿಸಲು ಸೋತಿದೆ ಮಸಿಕಟ್ಟಿದ ಗಡಿಗೆಯದು ದೈವದ ಪ್ರತೀಕ ಕನಸುಗಳು ಕರಗಿ ಹೊಗೆಯಾದಂತ ರೂಪಕ ಮನಸು ರಮಿಸಿ ಬಯಕೆಗೆ ನೇಣು ಹಾಕಬೇಕು ಹೊಸದೊಂದು ಕನಸು ನಾಳೆಗೆ ಹೆಣೆಯಬೇಕು ಗೌತಮ ಬುದ್ಧನಿಗೆ ಶಾಂತಿ ಅಂಹಿಸೆ ದೇವರು ಸಾಮ್ರಾಟ ಅಶೋಕಗೆ ರಣವಿಜಯ ದೇವರು ಹಸಿದವನಿಗೆ ತನ್ನ ಪಾಲಿನ ರೊಟ್ಟಿ ದೇವರು ಇರುವನೇ ಅನ್ನದೇವರಿಗಿಂತ ಭಿನ್ನದೇವರು
----------------------------------
Reg ID: HF25-5335
Please Note - You can vote only Once. If you have already voted - the voting will be disabled automatically by the system.