Submission 2498

ಒಲವು

Submitted By: Dr Shivanand Tavali

----------------------------------

ಮನಸೊಂದು ಮಿಡಿಯುತಿದೆ ಹಿಡಿ ಪ್ರೀತಿಗೆ ಸುಡುಭೂಮಿಯು ಕಾದಂತೆ ಹನಿ ನೀರಿಗೆ ದನಿಯೊಂದು ಕಾತರಿಸುತಿದೆ ಸವಿ ರಾಗಕೆ ಹೇಳು ಕೊನೆಯಂದು ಈ ಎದೆ ನೋವಿಗೆ ಕನಸೊಂದು ಕಾಡುತಿದೆ ನಿತ್ಯ ನನ ಬಿಡದೆ ಚಣವೊಂದು ಕಳೆಯದು ನಿನ ನೆನಪಿಲ್ಲದೆ ಕಾದಿರುವೆ ನಿನಗಾಗಿ ಇರುಳ ಹಗಲೆನ್ನದೆ ಕೋಗಿಲೆಯು‌ ಕಾದಂತೆ ವಸಂತಾಗಮಕೆ ನಿನ ನೆನಪಲ್ಲೇ ನಾನಿರುವೆ ಕೊನೆ ಉಸಿರವರೆಗೆ ನಿನ ಒಲವೊಂದೇ ಸಾಕೆನಗೆ ಈ ಬಾಳಿಗೆ

----------------------------------

Reg ID: HF25-5345

Please Note - You can vote only Once. If you have already voted - the voting will be disabled automatically by the system.

204
Votes
1,363
Views
9 Months
Since posted

VOTING Closed on Nov 30, 2025!

Scroll to Top