ಎಲ್ಲಿತ್ತು ಸ್ವಾತಂತ್ರ್ಯ..!
Submitted By: Shrishail Amaranna Hugar
----------------------------------
ಬ್ರಿಟಿಷರಿಗೆ ನಮ್ಮ ಸ್ವಾತಂತ್ರ್ಯವನ್ನು ತಟ್ಟೆಯಲ್ಲಿಟ್ಟು ಕೊಟ್ಟಿದ್ವಾ? ಇಲ್ಲವೆ ಬಂಡವಾಳವಾಗಿ ನೀಡಿಬಿಟ್ಟಿದ್ವಾ? ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೆಜ್ಜೆ ಹೆಜ್ಜೆಗೂ ಹೋರಾಟ ನಡೆದಿದೆ ಸ್ವಾತಂತ್ರ್ಯದ ಹೆಜ್ಜೆ ಗುರುತು ಕಾಣುವದೆಲ್ಲಿ?? ಪಿರಂಗಿಗಳ ನಳಿಗೆಗಳಿಗೆ ಛಿದ್ರ ಛಿದ್ರವಾಗಿ ಹರಡಿದ ಮೌಂಸದುಂಡೆಗಳಲ್ಲಿತ್ತು ಸ್ವಾತಂತ್ರ್ಯ ಬಿಸಿರಕ್ತದ ಯುವ ಧ್ವನಿಗಳ ಎದೆಯ ಕಿಚ್ಚಿನಲ್ಲಿತ್ತು ಬ್ರಿಟಿಷರ ಎದೆಗೆ ಗುದ್ದಿದ ಸ್ವಾತಂತ್ರ್ಯ. ಲಂಡನ್ ಸಾಮ್ರಾಜ್ಯಶಾಹಿ ಕೋಟೆಯ ಗೋಡೆಯನ್ನು ಛಿದ್ರ ಗೊಳಿಸಿದ ಕ್ರಾಂತಿಕಾರಿಗಳ ಕಣ್ಣಲ್ಲಿತ್ತು ಸ್ವಾತಂತ್ರ್ಯ ಉರುಳಿಗೆ ಕೊರಳು ನೀಡುವ ಸಮಯದಿ ಅಮರ ಪುರುಷರ ದೇಶಭಕ್ತಿಯ ವೀರಗೀತೆಯಲ್ಲಿತ್ತು ಸ್ವಾತಂತ್ರ್ಯ. ವಂದೇ ಮಾತರಂ ಗೀತೆಯ ಗುಡುಗಿಗೆ ಕೆಂಪಂಗಿಯು ಚಾಟಿ ಬೀಸಿದರು ಎದುರದ ಧೀರ ಗುಂಡಿಗೆಯಲ್ಲಿತ್ತು ಸ್ವಾತಂತ್ರ್ಯ. ಸ್ವತಂತ್ರ್ಯ ಲಕ್ಷ್ಮೀಯು ನಿಟ್ಟುಸಿರು ಬಿಡಲು ಆತ್ಮ ಸಮರ್ಪಣೆ ಮಾಡಿದ ತಾಯಂದಿರ ಕಣ್ಣಿರಿನಲ್ಲಿತ್ತು ಸ್ವಾತಂತ್ರ್ಯ. ಮಂದಿರ, ಮಸೀದಿ, ಚರ್ಚುಗಳ, ಸರ್ವಧರ್ಮಗಳ ಆಚರಣೆಯಲ್ಲಿದೆ ಭವ್ಯ ಭರತಭೂಮಿಯ ಸ್ವಾತಂತ್ರ್ಯ. ಕೆಂಪು ಕೋಟೆಯಲ್ಲಿ ಅರಳಿದ ಭಾರತದ ತ್ರಿವರ್ಣ ಧ್ವಜದಲ್ಲಿದೆ ನನ್ನ ಶ್ರೇಷ್ಠ ಭಾರತದ ಸ್ವಾತಂತ್ರ್ಯ.
----------------------------------
Reg ID: HF25-5351
Please Note - You can vote only Once. If you have already voted - the voting will be disabled automatically by the system.