ಜ್ಞಾನಿಗಳ ಸೃಷ್ಟಿಕರ್ತ
Submitted By: Naveenkumar angadi
----------------------------------
ಬಡತನದಲ್ಲಿ ಅರಳಿದ ಗುಲಾಭಿ ಹೂವು ನೀನು. ಬಡತನದಲ್ಲಿ ಹುಟ್ಟಿದ ಮಕ್ಕಳಿಗೆ ಸ್ಫೂರ್ತಿ ನೀನು. ಅಜ್ಞಾನಿಗಳಿಗೂ ಕಣ್ಣನ್ನು ತೆರೆಸುವ ಕಣ್ಮಣಿ ನೀನು. ಕಲಿತ ವಿದ್ಯೆಯನ್ನು ಅಜ್ಞಾನಿಗಳ ತಲೆಯಲ್ಲಿ ತುಂಬುವ ಬುದ್ದಿವಂತ ನೀನು. ಆ ದೇವರಿಗೂ ಕೂಡ ಸರಿಸಾಟಿ ನೀನು. ಭಕ್ತರು ಆ ದೇವರನ್ನು ಹೇಗೆ ನಂಬುವರೋ. ವಿದ್ಯಾರ್ಥಿಗಳು ಕೂಡ ನಿನ್ನನ್ನು ಹಾಗೆ ನಂಬುವರಯ್ಯ. ಭಕ್ತರಿಗೆ ಆ ದೇವರು ಹೇಗೆ ವರ ನೀಡುವನೋ. ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ನೀನು ಶಿಕ್ಷಣ ನೀಡುವನಯ್ಯ. ನೀನಿಲ್ಲದೆ ಜ್ಞಾನಿಗಳಿಲ್ಲಯ್ಯ. ನೀನಿರದ ಜಾಗದಲ್ಲಿ ಅಜ್ಞಾನಿಗಳ ಸಂತೆ ನಡೆಯುತಿಹುದು. ನೀನಿದ್ದ ಜಾಗದಲ್ಲಿ ಜ್ಞಾನಿಗಳ ಜಾತ್ರೆಯ ನಡೆಯುತಿಹುದಯ್ಯ ಶಿಕ್ಷಕನೇ.... ಅಜ್ಞಾನಿಗಳಿಗೆ ಜ್ಞಾನದ ಮಾರ್ಗ ತೋರಿಸುವವನೇ ನಿಜವಾದ ಶಿಕ್ಷಕ...
----------------------------------
Reg ID: HF25-5354
Please Note - You can vote only Once. If you have already voted - the voting will be disabled automatically by the system.