Submission 2549

ಗುರು ಬ್ರಹ್ಮ

Submitted By: DURVE RAVI PUNDALIK

----------------------------------

ಕಲಿಸಿದಿರಿ ಹೆಜ್ಜೆ ಇಡುವುದ , ಕಾಲಿಗೆ ಸಿಕ್ಕ ತೊಡಕುಗಳ ಒದ್ದು ನಡೆವುದ , ತೊದಲು ನುಡಿಯ ಸ್ವರವ ಮಾಡಿ ಜಗದಿ ಹೊರಾಡುವುದ ನೂರು ವರುಷ ಬದುಕಿ ದೇವರಾಗಿಬಿಡಿ ಕಡಲ ಕುಡಿವ ಛಾತಿಯುಳ್ಳ ಮಂದಿಗೆ ಭಗವಂತನೂ ಶರಣಾಗಿಹ ನಿಮ್ಮೀ ಹೃದಯ ವೈಶಾಲ್ಯತೆಗೆ ಹಡೆದ ತಾಯಿಯು ಬಿಡುವಳೆನೋ ಹಸುಳೆಯ ಕೈಯನೊಂದು ಗುರು ಎತ್ತಿ ಹಿಡಿಯುವ ಬೀಳುವ ಶಿಷ್ಯನ ತನ್ನ ಆಸೆಗಳ ಕೊಂದು ನೀವು ಬರೆಯಲು ಕಲಿಸಿದ ಅಕ್ಷರಗಳು ಅನನ್ಯ , ಅದರ ಮುಂದೆ ಅಶೋಕ ಅಲೆಕ್ಸಾಂಡರರ ಶಾಸನವು ಶೂನ್ಯ

----------------------------------

Reg ID: HF25-5366

Please Note - You can vote only Once. If you have already voted - the voting will be disabled automatically by the system.

38
Votes
305
Views
11 Months
Since posted

VOTING Closed on Nov 30, 2025!

Scroll to Top