Submission 2553

ಅಲೆಗಳಡಿಯ ಬದುಕು

Submitted By: Dr. Vijayalaxmi Dandin

----------------------------------

ಸಾಗರದ ಬೆಳ್ಳಿಯ ಛಾದರದ ಅಡಿಯಲ್ಲಿ, ಉಕ್ಕೇರುವ ನೀಲೀ ಅಲೆಗಳ ತಳಮಳದಲ್ಲಿ, ಕರಗುವನು ಸೂರ್ಯ ದಿವ್ಯ ಶರಣಾಗತಿಯಲಿ! ಕಡಲಡಿಯ ಕರಿ ಕತ್ತಲೆಯ ಸರಿಸಿ, ಬೆಳಗುವವು ಅದೃಶ ಜೀವಿಗಳು ಸಹಸ್ರಗಳಲ್ಲಿ, ಅಂದುಕೊಂಡಂತೆ, ಕರಗುವುದಿಲ್ಲ ಕನಸುಗಳು ಕತ್ತಲಲ್ಲಿ, ಬೆಳಕದುಂಬಿ ಮಿನುಗುತ್ತಿರುತ್ತವೆ ಕಾಣದಂತೆ ಅಗೋಚರವಾಗಿ, ಕೆಲವೊಮ್ಮೆ ಚಿಮ್ಮಿ ಮೇಲೆರುತ್ತವೆ ಅಲೆಗಳಂದದಿ, ಬೆಳಗಲು ಬಾನಂಗಳದಲ್ಲಿ ಚುಕ್ಕೆಗಳಂದದಿ!

----------------------------------

Reg ID: HF25-5368

Please Note - You can vote only Once. If you have already voted - the voting will be disabled automatically by the system.

93
Votes
679
Views
9 Months
Since posted

VOTING Closed on Nov 30, 2025!

Scroll to Top