ಸಾವಿರ ಕಷ್ಟಗಳ ಸಾಹುಕಾರ
Submitted By: Shweta Sadashivayya Hiremath
----------------------------------
ಮಕ್ಕಳ ಮೇಲೆ ತೋರುವ ಪ್ರೀತಿ ಅಪಾರ, ಮಕ್ಕಳ ಆಸೆಗಳನ್ನು ಈಡೇರಿಸುವ ಸಾಹುಕಾರ, ಮಕ್ಕಳ ಕಣ್ಣೀರಿಗೆ ನೀವೆ ತೊರುವಿರಿ ಕನಿಕರ, ಮಕ್ಕಳ ಮೊಗದಲ್ಲಿ ನಗು ಮೂಡಿಸುವ ಜಾದುಗಾರ, ಜೀವನ ಎಂಬ ಮೌಲ್ಯವನ್ನು ಕಲಿಸಿದ ಶಿಕ್ಷಕ, ಪ್ರೇರೇಪಣೆಯ ಅಂಶಗಳನ್ನು ಹೇಳುವ ಪ್ರೇರಕ, ಮಕ್ಕಳನ್ನು ಸಂರಕ್ಷಿಸುವ ರಕ್ಷಕ, ಬದುಕೆಂಬ ಬಂಡಿಯನ್ನು ನಡೆಸುವ ಚಾಲಕ, ಕೋಪದಿ ಪ್ರೀತಿಸುವ ತಾಯಿ ಹೃದಯ ನಿಮ್ಮದು, ವರ್ಣಿಸಲು ಪದಗಳೇ ಸಾಲದು, ವರ್ಣಿಸಲು ಹೋದರೆ ಆ ವಿಷಯವೇ ಮುಗಿಯದು, ಮಕ್ಕಳನ್ನ ಬಹುಬೇಗ ಅರ್ಥಮಾಡಿಕೊಳ್ಳುವ ಜೀವ ನಿಮ್ಮದು, ಮಕ್ಕಳ ಜೀವನದ ದಿಕ್ಸೂಚಿ, ಸರಿ ಮಾರ್ಗಕ್ಕೆ ಕರೆದೊಯ್ಯುವ ಸಾರಥಿ.
----------------------------------
Reg ID: HF25-5380
Please Note - You can vote only Once. If you have already voted - the voting will be disabled automatically by the system.