Submission 2733

ಹರಿದು ಬಾ ಮಹದಾಯಿ ಬರದ ಭೂಮಿಗೆ

Submitted By: VIDYSAGAR S DIXIT

----------------------------------

ಜೀವ ನದಿಯ ಜಲಧಾರೆ ಯಾರದ್ದೂ ಸೊತ್ತಲ್ಲ ! ದಾಹ ತಣಿಸಿ ಬೆಳೆಗೆ ಉಸಿರಾದರೆ ಸಾಕಲ್ಲ? ಮುಗ್ಧ ಜನ ಮಾನಸಕೆ ಒಣ ರಾಜಕೀಯ ಗೊತ್ತಿಲ್ಲ.. ಇದು ನಮ್ಮದೆಂಬ ರಾಜ್ಯಗಳ ಕಿತ್ತಾಟ ಬೇಕಿಲ್ಲ.. ಹರಿದು ಬಾ ಮಹದಾಯಿ ಬರದ ಭೂಮಿಗೆ. ದಣಿಯದ ಸಾವಿರಾರು ದಿನಗಳ ಧರಣಿಯಾದವು ದುಡಿಯುವ ಕೈಗಳು ಬಂಧನದ ಬೇಡಿ ತೊಟ್ಟವು ದನಿ ಏತ್ತಿದ ಮೂಕಮನಸ್ಸುಗಳು ಪಂಜರದ ಪಾಲಾದವು ರಾಜಕೀಯ ಚದುರಂಗದಾಟಕೆ ನೂರಾರು ಜೀವಗಳು ಬಲಿಯಾದವು ಹರಿದು ಬಾ ಮಹದಾಯಿ ಬರದ ಭೂಮಿಗೆ. ಸಹ್ಯಾದ್ರಿಯ ಬೆಟ್ಟದ ಶ್ರೇಣಿಗಳಲ್ಲಿ ಉಗಮದ ಸೆಳೆ ಕಾಡು ಮೇಡು ಹರಿಯುವ ಜೀವ ನದಿಗೇಕೆ ಕಟ್ಟಳೆ..? ಮಹದಾಯಿಯೋ ಮಾಂಡೊವಿಯೋ ನೀನೊಬ್ಬಳೆ ಜೀವ ಕಳೆ ಬೆಳೆ ಫಲಿಸುವಂತೆ ದಾಹ ತಣಿಸಿ ಸುರಿಯೇ ಮಳೆ ಹರಿದು ಬಾ ಮಹದಾಯಿ ಬರದ ಭೂಮಿಗೆ.

----------------------------------

Reg ID: HF25-5423

Please Note - You can vote only Once. If you have already voted - the voting will be disabled automatically by the system.

3
Votes
193
Views
1 Year
Since posted

VOTING Closed on Nov 30, 2025!

Scroll to Top