ಗೋಕುಲ
Submitted By: Mounesh Gubachi
----------------------------------
ಹೆಂಡತಿ ಇರದ ನನ್ನ ಮನೆಯು ದೀಪ ಇರದ ದೇಗುಲ! ಅವಳು ಇರಲು ಅದುವೆ ನನಗೆ ರಾಧೆಯು ನಲಿವ ಗೋಕುಲ! ಅವಳ ಕೈಗಳ ನುಲಿವ ಬಳೆಗಳ ನಾದ ಮನೆಯಲಿ ರಿಂಗಣ! ಹೆಜ್ಜೆಯ ಸದ್ದು ಗೆಜ್ಜೆಯ ಸ್ವರವು ಇಲ್ಲದ ಮನೆಯು ಭಣ ಭಣ! ದೇಹದ ಮೋಹದ ಕಾಮನೆ ನೆವದಲಿ ಇಬ್ಬರ ನಡುವೆ ಸೆಳೆತವು ಶಯನದ ಮಡಿಲಲ್ಲಿ ಸ್ಪರ್ಶದ ಬಲೆಯಲಿ ನಮ್ಮನು ನಾವೇ ಮರೆವೆವು! ಘಮಘಮ ಹೂವಿನ ಸುಮಧುರ ಕಂಪು ಅವಳ ಬೆನ್ನಲಿ ಬಳುಕುವ ಜಡೆಯಲಿ! ಪಳಪಳ ಹೊಳೆಯುವ ಬೆಳ್ಳನೆ ಹರಳಿನ ಮೂಗುತಿ ಅವಳ ಮೊಗದಲಿ! ರೊಟ್ಟಿ ತಟ್ಟುವ ಕೈಯ ಸಪ್ಪಳ ಮನೆಯ ದೇವರ ಜಾಗಟೆ! ಕಾದ ಎಣ್ಣೆಗೆ ಕರಗುವ ಜೀರಿಗೆ ಅನ್ನದಾತೆಗೆ ಅಕ್ಷತೆ!
----------------------------------
Reg ID: HF25-5428
Please Note - You can vote only Once. If you have already voted - the voting will be disabled automatically by the system.