Submission 2811

ಅವನು -ಪ್ರೀತಿ-ಅವಳು

Submitted By: Dr.Nikhita Talwar

----------------------------------

ಕಳುಹಿಸಲಿ ಹೇಗೆ ಅವನನ್ನು,ತಿರುಗಿ ನೆಪ ಹೇಳಿ ಬರುವವನನ್ನು?! ಮರೆಯುವುದಾದರೂ ಹೇಗೆ,ನನ್ನಲ್ಲೇ ಅವನಾಗಿ ಉಳಿದವನನ್ನು,ಪ್ರಶ್ನಿಸಲಿ ಹೇಗೆ ಅವನನ್ನು ಉತ್ತರಿಸಿದಷ್ಟು ಪ್ರಶ್ನೆಯಾಗಿಯೇ ಉಳಿಯುವನನ್ನು?! ಎಲ್ಲವೂ ಮರೆತಂತೆ ನಟಿಸುವುದು ಸುಲಭವಿಲ್ಲ ಹಾಗಂತ ಕಾಡುವ ಪ್ರತಿ ನೆನಪಿಗೆ ನನ್ನನು ಒಪ್ಪಿಸುವುದರಲ್ಲಿ ಅರ್ಥವಿಲ್ಲ ಅಂದುಕೊಂಡರೆ ಎಲ್ಲವೂ ಹೂವಿನಷ್ಟೇ ಹಗುರ, ಇಲ್ಲದಿದ್ದರೆ ಹೂವು ಕೂಡ ಬೆಟ್ಟದಷ್ಟೇ ಭಾರ, ಆದರೂ ಕಾದಿರುವೆ ಸಮಯದ ಮೋಡಿಗೆ,ಭರವಸೆಯ ಬೆಳಕಿಗೆ...

----------------------------------

Reg ID: HF25-5443

Please Note - You can vote only Once. If you have already voted - the voting will be disabled automatically by the system.

121
Votes
717
Views
8 Months
Since posted

VOTING Closed on Nov 30, 2025!

Scroll to Top