Submission 477

ಮೌನಿ ನಾನಾಗಬೇಕು !!

ರಚನೆ : ಸುರಭಿ . ಜೆ . ಸಿ

----------------------------------

ಭೋರ್ಗರೆವ ಕಡಲ ತೀರದಿ, ಹೊನ್ನಿನ ಹೊಳಪಿರುವ ಮರಳ ಮೇಲೆ ಕೂತು, ತಂಪಾದ ಗಾಳಿಯು ಮೋರೆಯ ನೇವರಿಸಿ ಮುದ ನೀಡುತ್ತಾ, ಅಂಧಕಾರದ ಬೆನ್ನಲ್ಲೇ ಹಿಮಕರನು ತಿಳಿಯಾದ ಬೆಳಕಿನೊಂದಿಗೆ ಪ್ರಕಾಶಿಸುತ್ತಾ, ಪ್ರಶಾಂತವಾದ ಅಲೆಗಳ ಪಿಸು ಮಾತನ್ನು ಆಲಿಸುತ್ತಾ, ಮಿನುಗವ ತಾರೆಗಳ ಎಣಿಸುತ್ತಾ, ನನ್ನೊಳಗಿನ ಅಂತರ್ಭಾವವ ಮರೆತು, ಕಣ್ಣಂಚಿನಲ್ಲಿ ಸ್ವಾತಿಮುತ್ತಿನಂತೆ ಉದುರುವ ಕಂಬನಿಯ ತಡೆದು, ಏಕಾಂತದ ಮಡುವಿನಲ್ಲಿ ಮರುಗಿದ ಮನದ ಮುಖವಾಡ ಕಳಚಿ, ಬಿರುಸಾಗಿ ಸುರಿವ ವರ್ಷಧಾರೆಯಲ್ಲಿ ಮಿಂದು, ಇಳೆಯ ತಂಪಾಗಿಸುವಂತೆ, ಮನದ ಹಗೆಯ ತಣಿಸಿ, ಮೌನಿ ನಾನಾಗಬೇಕು!!

----------------------------------

ನೋಂದಣಿ ಐಡಿ : KPF-S1-5046

0
Votes
190
Views
1 Year
Since posted

Finished since 453 days, 21 hours and 6 minutes.

Scroll to Top