Submission 842

ಮನೆಯಿಂದಾಚೆ ಯಾಕೆ

ರಚನೆ : ನಂದಕುಮಾರ್ ಏನ್ ಟಿ

----------------------------------

ಹೆಣ್ಣು ಎಂದೇಕೆ ಬೇರೆ ಯೋಚನೆಯಲ್ಲಿ ಯಾಕೆ ನೋಡುತ್ತೀರಾ. ಅವಳಿಂದಲೆ ನಮ್ಮ ಜನ್ಮ,ಅವಳಿಂದಲೇ ನಮ್ಮ ಜೀವನ, ಅವಳಿಂದಲೇ ಮೊದಲ ಶಿಕ್ಷಣ. ಸಾಕಿ ಸಲಹಿ ಮುದ್ದಾಗಿ ಸಾಕುವವಳು ಅವಳೇ ತಾಯಿ. ಮಕ್ಕಳಿಗೆ, ಗಂಡನಿಗೆ ಬುದ್ದಿ ಮಾತುಗಳನ್ನ ಹೇಳಿ ಸಂಸಾರ ಅನ್ನೋ ಸಾಗರದಲ್ಲಿ ದೇವರಾದವಳು ಹೆಣ್ಣು. ಈ "ಮುಟ್ಟು"ಎಂಬುದು ನಮ್ಮ ಜನ್ಮಕ್ಕೆ ಕಾರಣ ಆದರೆ ಈ "ಮುಟ್ಟೆ" ನಮಗೆ ಮೈಲಿಗೆ ಎಂದು ಅವಳನ್ನೇಕೆ ಹೊರ ಕೂರಿಸುತ್ತೀರಾ ?, ನಮ್ಮ ಜನ್ಮ, ಏಳಿಗೆ, ಸಾಧನೆಗೆ ಆ ಮುಟ್ಟೆ ಕಾರಣ. ಬಹಳಷ್ಟು ಹಿಂದಿನ ವರ್ಷಗಳಲ್ಲಿ ದಿನಾಂಪ್ರತಿ ಕೆಲಸ ಮಾಡಿ ಹೊಟ್ಟೆ ತುಂಬಿಕೊಳ್ಳುತ್ತಿದ್ದರು, ತಿಂಗಳ ಮುಟ್ಟಿಗೆ ಒಳಗದಾಗ ಮೂರ್ನಾಲ್ಕು ದಿನಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಹೊರಗೆ ಕೂರಲೇ ಬೇಕೆಂದು ನಿಯಮ ಖಂಡಿತ ಎಲ್ಲೂ ಇಲ್ಲ. ಅಮಾನವಿಯಾಗಿ ಹೊರ ಕೂರಿಸುವುದನ್ನ ನಿಲ್ಲಿಸಿ. ಅವಳ ಮುಟ್ಟನ್ನು ದೇವರೆಂದು ನೋಡಿರಿ.

----------------------------------

ನೋಂದಣಿ ಐಡಿ : KPF-S1-5384

0
Votes
166
Views
1 Year
Since posted

Finished since 453 days, 19 hours and 12 minutes.

Scroll to Top