Submission 910

ಅಸ್ಥಿತ್ವದ ಹಾಹಾಕಾರ

ರಚನೆ : ಶ್ರುತಿ ಮಂಜುನಾಥ್

----------------------------------

ಇದು ಯಾರ ಅಸ್ಥಿತ್ವ? ದಿನದ ಹೊತ್ತಿಗೆ ಭರವಸೆ ಎಂಬುದೆಲ್ಲಿದೆ. ಅಸ್ಥಿತ್ವದ ಪ್ರಶ್ನೆಗೆ ಅವಕಾಶವೇ!! ಅಧಿಕಾರಕ್ಕೆ ತೊಟ್ಟಿಲು ಕಟ್ಟುವ ಶಾಸ್ತ್ರ ಮನೆಯ ಮಂದಿಯಲ್ಲೇ ಚಿಗುರುತ್ತಿದೆ. ಅವಳಾದರೂ ಧರೆಗೆ ಬಂದಿರುವುದು ಹೀಗಲ್ಲವೇ....ಹೆಣ್ಣಾಗಿ ಪುತ್ರನಿಗೆ ಜನ್ಮ ನೀಡಿದರೇನು ವೈಭೋಗವೇ.. 'ಅಧಿಕಾರದ ಶಾಖವೆಂಬುದು ಹಾಸಿಗೆಯಾದರೆ ಮನದ ಮೌಲ್ಯಗಳಿಗೆ ಎಕ್ಕಡವಾಗಬೇಕಾಗುತ್ತದೆ. 'ಬಾಂಧವ್ಯಕ್ಕೆ ಬೀಗ ಹಾಕಿ ಬೆಂಕಿ ಹಚ್ಚಬೇಕಾಗುತ್ತದೆ. 'ಭಾವನೆಗಳಿಗೆ ಶವದ ಬೂದಿಯ ವಸ್ತ್ರ ಬಿಡಬೇಕಾಗುತ್ತದೆ. ಈ ಮಾತ್ರಕ್ಕೆ ಅಸ್ಥಿತ್ವದ ಪ್ರಶ್ನೆಯೇ??

----------------------------------

ನೋಂದಣಿ ಐಡಿ : KPF-S1-5423

0
Votes
190
Views
1 Year
Since posted

Finished since 497 days, 15 hours and 18 minutes.

Scroll to Top