ಓ ಒಲವೇ...
Submitted By: Sahana Patoli
----------------------------------
ಓ ಒಲವೇ... ನನಗಿಂದು ಒಲವಾಗಿದೆ ನಿನಗೆಂದು, ಬರುವೆಯಾ ನೀ ನನಗೆಂದು... ನನಗಿಂದು ನಿಜವಾದ ಪ್ರೀತಿಯ ಅನುಭವವಾಗಿಹುದು; ನಿನ್ನ ಪ್ರೀತಿಯು ನನ್ನೆದೆಯಲಿ ಮನೆ ಮಾಡಿಹುದು... ಕಡಲಾಳದಂತಿರುವ ನನ್ನ ಮನದಾಳದಿ ನೀನಿಳಿದಿರುವೆ ; ಮನದಿ ಮನೆ ಮಾಡಿಕೊಂಡು ಉಳಿದಿರುವೆ.. ನಿನ್ನೊಲವ ಅರಮನೆಯಲಿ ಇರುವಾಸೆ ನನಗೆ; ನೀ ಕೈ ಹಿಡಿದು ಕರೆದರೆ ಬಲಗಾಲಿಟ್ಟು ಒಳ ಬರುವೆ ನಿನ್ನಯ ಮನೆಗೆ.. ನನ್ನದೊಂದೇ ಆಸೆ ಜೀವನವಿಡಿ ನಿನ್ನೊಡನಿರಲು, ಬಯಸುವೆ ಕೊನೆವರೆಗೂ ನೆಮ್ಮದಿಗಾಗಿ ನಿನ್ನದೇ ಮಡಿಲು... - ಇಂತಿ ನಿನ್ನವಳು
----------------------------------
Reg ID: HF25-5161
Please Note - You can vote only Once. If you have already voted - the voting will be disabled automatically by the system.