Submission 2033

ಕಣ್ಣೀರು

Submitted By: Vishnuteja P

----------------------------------

ಒಡೆದ ಮನವನು ನೋಡಿ ಕರಗುವ ನೀನು, ಮಾಡದ ತಪ್ಪಿಗೆ ಸಾಕ್ಷಿಯಾಗುವೆ ಏಕೆ? ಕಷ್ಟಗಳ ಆಗಮನದಲಿ ಹರಿಯುವ ನೀನು, ಸುಖದ ಆಚರಣೆಯಲಿ ಬತ್ತಿ ಹೋಗುವೆ ಏಕೆ? ಸಂಬಂಧಗಳು ಅಂತರವಾದಾಗ ಮಣಿಯುವ ನೀನು, ಬೇಡದ ಸಂಬಂಧಗಳಿಗೆ ಘಾಸಿಯಾಗುವೆ ಏಕೆ? ಆನಂದಭಾಷ್ಪವಾಗಿ ಉದ್ಭವಿಸುವ ನೀನು, ಕೊರಗುವ ಜೀವಕೆ ಕಾರಣವಾಗುವೆ ಏಕೆ?

----------------------------------

Reg ID: HF25-5179

Please Note - You can vote only Once. If you have already voted - the voting will be disabled automatically by the system.

149
Votes
897
Views
1 Year
Since posted

VOTING Closed on Nov 30, 2025!

Scroll to Top