ಏ ಮನುಜ ನೀ ಚಿಂತಿಸಬೇಡ
Submitted By: ಮುತ್ತಣ್ಣ ರಾಠೋಡ್
----------------------------------
ಚಿಂತಿಸಬೇಡ ಮನುಜ,ಚಿಂತಿಸಿ ಮರಗಬೇಡ, ಸೂರ್ಯ ಮುಳುವಾಯಿತೆಂದು ಅಳಬೇಡ, ನಂತರ ಕತ್ತಲಲ್ಲಿ ಚುಕ್ಕಿ ತಾರೆಯು ಮೂಡುವುದನ್ನ ಮರೆಯಬೇಡ ಚಿಂತಿಸಬೇಡ ಮನುಜ,ಚಿಂತಿಸಿ ದುಃಖ ಪಡಬೇಡ, ನಿನ್ನ ಜೀವನ ಇಲ್ಲೇ ಮುಗೀತು ಎಂದು ಕುಳಿತುಕೊಳ್ಳಬೇಡ, ನಂತರ ಜೀವನದಲ್ಲಿ ನಿನಗಾಗಿಯೂ ಇರುವ ಮೇರು ಪರ್ವತವನ್ನು ಹತ್ತುವುದನ್ನು ಬಿಡದೆ ಇರಬೇಡ.... ಚಿಂತಿಸಬೇಡ ಮನುಜ, ಗುಲಾಮಗಿರಿಯ ಸಂಕೋಲೆಯಲ್ಲಿ ಅವಲಂಬಿತರು ವಾಗಿರುವ ಬದುಕನ್ನು ಕಟ್ಟಕೊಳ್ಳಬೇಡ, ನಿನ್ನದೇ ಆದ ಜೀವನದಲ್ಲಿ ಅರಸನಾಗುವ ಸ್ಥಾನವನ್ನು ಅಲಂಕರಿಸದೆ ಇರಬೇಡ ಚಿಂತಿಸಬೇಡ ಮನುಜ, ಚಿಂತಿಸಿ ಸುಡುಗಾಡಿಗೆ ಆಹುತಿ ಆಗಬೇಡ, ನೀನು ಅವಳಿಗಾಗಿ ಆಲೋಚಿಸಿ ಕಾಯಬೇಡ, ನಿನ್ನ ಸಾಧನೆಗಾಗಿ ಕಾಯುತ್ತಿರುವ ನಿನ್ನ ಪೋಷಕರ ನೋವನ್ನ ಮರೆಯಬೇಡ
----------------------------------
Reg ID: HF25-5339
Please Note - You can vote only Once. If you have already voted - the voting will be disabled automatically by the system.