ಸ್ವಾರ್ಥ ಜೀವನ
Submitted By: Dr.Shilpa.L.Hirekerur
----------------------------------
ವಸ್ತುಗಳನ್ನ ಪ್ರೀತಿಸಿ, ಮನುಷ್ಯರನ್ನು ಉಪಯೋಗಿಸಿ ನಡೆದಿದೆ ಸ್ವಾರ್ಥ ಜೀವನ. ಎಲ್ಲಿಗೆ ಸಾಗುವುದೋ ಈ ಪಯಣ? ಸಂಬಂಧಗಳಿಗಿಲ್ಲ ಯಾವುದೇ ಮೌಲ್ಯ, ಆಸ್ತಿ ,ಅಂತಸ್ತು, ಸ್ಥಾನಮಾನವೇ ಅಮೂಲ್ಯ ll ಮಾನವೀಯ ಮೌಲ್ಯಗಳೆಲ್ಲ ಮಾಯವಾಗಿ,ಸಂಬಂಧಗಳೆಲ್ಲ ನಶಿಸಿ ಹೋಗಿ,ಸ್ವಾರ್ಥ ಬದುಕಿಗೆ ತಲೆಬಾಗಿ,ಮನವೆಲ್ಲಾ ಕದಡಿ, ಕಲುಷಿತವಾಗಿ ಪರಿತಪಿಸುತ್ತಿರುವೆವು ನೆಮ್ಮದಿಗಾಗಿ ll ಹತ್ತಿರವಿರುವುದನ್ನು ಕಡೆಗಣಿಸಿ, ನಮ್ಮೆಡೆಗೆ ಬಾರದನ್ನು ಅಪೇಕ್ಷಿಸಿ, ಅಂತರಂಗದಿಂದ ನೋವನ್ನು ಅನುಭವಿಸಿ, ಬಾಹ್ಯ ಸಂತೋಷವನ್ನು ಪ್ರದರ್ಶಿಸಿ, ಇರುವೇವು ಮಂದಹಾಸ ಸೂಸಿ ll
----------------------------------
Reg ID: HF25-5401
Please Note - You can vote only Once. If you have already voted - the voting will be disabled automatically by the system.